Now we are available in English,Hindi,Telugu,Kannada Languages | ಈಗ ನಾವು ಇಂಗ್ಲಿಷ್, ಹಿಂದಿ, ತೆಲುಗು, ಕನ್ನಡ ಭಾಷೆಗಳಲ್ಲಿ ಲಭ್ಯವಿದ್ದೇವೆ | अब हम अंग्रेजी, हिंदी, तेलुगु, कन्नड़ भाषाओं में उपलब्ध हैं | ఇప్పుడు మనకు ఇంగ్లీష్, హిందీ, తెలుగు, కన్నడ భాషలలో అందుబాటులో ఉన్నాయి

Blog Details

ಮೂರುಗಂಟು...ಏಳುಹೆಜ್ಜೆ

Posted on 28, July 2021 06:26:46 PM



Welcome to EdigaMatchmaker

" ಭಾವಗಳ ಸ್ಪಂದನ

ಹೃದಯಗಳ ಬಂಧನ "

ಮೂರುಗಂಟು...ಏಳುಹೆಜ್ಜೆ

"ಮೂರುಗಂಟಿನ ನಂಟಿಗೆ ಜೊತೆಯಾಗಿ ಇಡುವ ಏಳುಹೆಜ್ಜೆಗಳ ಸಂಬಂಧ ಏಳುಜನ್ಮಗಳ ಅನುಬಂಧ"

 ಮದುವೆ ಎನ್ನುವುದು ಪ್ರತಿಯೊಬ್ಬ ಹೆಣ್ಣು /ಗಂಡಿನ ಜೀವನದಲ್ಲಿ ಒಂದು ಸುಂದರವಾದ ಅಧ್ಯಾಯ.ಮೂರುಗಂಟು ಬೆಸೆದು ಏಳುಹೆಜ್ಜೆಯ ನೀಡುವ ಸಮಯ

ಅವನ /ಅವಳ ಕಲ್ಪನೆಯ ಬಾಳಸಂಗಾತಿಗೆ ಕಾಯ,ವಾಚ,ಮನಸಾ ಇವತ್ತಿನಿಂದ ನಾನು ಸಂಪೂಣ೯ವಾಗಿ ನಿನ್ನವಳು /ನಿನ್ನವನು ನಿನ್ನ ಜೀವನದ ಪ್ರತಿಕ್ಷಣ ಕೈ ಹಿಡಿದು ಜೊತೆಯಾಗಿ ನಡೆಯುವೆ ಎಂದು ಪ್ರಮಾಣ ಮಾಡುವ ಸುಮಧುರ ಘಳಿಗೆ.

ಈ ಸಂಭ್ರಮಕ್ಕೆ ನೀವು ಸಾಕ್ಷಿಯಾಗುವ ಮುನ್ನ ಸ್ವಲ್ಪ ಯೋಚಿಸಿ.

ಬಾಳ ಸಂಗಾತಿಯ ಆಯ್ಕೆ : ನಿಮ್ಮ ಬಾಳ ಸಂಗಾತಿಯಾಗಬಲ್ಲವರು, ನಿಮ್ಮ ಭಾವನೆಗಳಿಗೆ ಸ್ಪಂದಿಸುವರು.ನಿಮ್ಮ ಮನಸ್ಥಿತಿಯನ್ನು ಅರಿಯಬಲ್ಲರು.ನಿಮ್ಮ ಕುಟುಂಬದ ಬಗ್ಗೆ ಗೌರವ ಹೊಂದಿರುವರು,ನಿಮ್ಮ ಭವಿಷ್ಯದ ಕನಸಿನ ಹಕ್ಕಿಗೆ ರೆಕ್ಕೆಯಾಗಬಲ್ಲರು, ಜೀವನವೀಡಿ ನಿಮ್ಮ ಬೇಕು-ಬೇಡಗಳನ್ನು ಅಥೈ೯ಸಿಕೊಂಡು ನಿಮ್ಮೊಡನೆ ಹೊಂದಿಕೊಂಡು ಬದುಕಬಲ್ಲರು ಜೀವನಪೂತಿ೯ ಅವರೊಂದಿಗೆ ಸುಖ,ಸಂತೋಷ,ನೆಮ್ಮದಿಯಿಂದ ಬದುಕಬಲ್ಲೆ ಎಂದಾದರೆ ಮುಂದುವರೆಯಿರಿ.

ಕೌಟುಂಬಿಕ ಹಿನ್ನಲೆ : ಮದುವೆ ಎನ್ನುವುದು ಎರಡು ಮನಸುಗಳ ಜೊತೆಗೆ ಎರಡು ಮನೆತನಗಳಿಗೆ ಸಂಬಂಧಿಸಿದವಿಷಯ ಆಗಿರುವುದರಿಂದ ಪರಸ್ಪರ ಇಬ್ಬರು ತಮ್ಮ ಸಂಗಾತಿಯ ಕುಟುಂಬದ ಬಗ್ಗೆ ತಿಳಿಯುವುದು ಅಗತ್ಯವಾಗಿದೆ. ಅವರ ಹಿನ್ನಲೆ, ಆಥಿ೯ಕ ಸ್ಥಿತಿ, ಸಾಮಾಜಿಕ ಹೊಂದಾಣಿಕೆ,

ಸಂಸ್ಕೃತಿ-ಸಂಪ್ರದಾಯ, ಎರಡು ಮನೆಯವರ ಅಭಿಪ್ರಾಯ ತಿಳಿದುಕೊಂಡು ಅನುಮತಿಯೊಂದಿಗೆ ಮುಂದುವರೆಯುವುದು ಉತ್ತಮ.

ಮಾನಸಿಕ ಸಿದ್ಧತೆ : ಮದುವೆಯ ಬಗ್ಗೆ ನಿಮಗಿರುವ ಸಂದೇಹಗಳನ್ನು ಬಗೆಹರಿಸಿಕೊಂಡು,ತೊಂದರೆ-ತೊಡಕುಗಳನ್ನು ನಿವಾರಿಸಿಕೊಂಡು ನೀವು ಉಳಿದ ಜೀವನದ ಅದ್ಭುತ ಕ್ಷಣಗಳನ್ನು ಸಂಗಾತಿಯೊಂದಿಗೆ ಕಳೆಯಲು ಬಯಸುತ್ತೀರಿ ಎಂದಾದರೆ ಹೊಸ ಜೀವದೊಂದಿಗೆ ಹೊಸ ಜೀವನ ಪ್ರಾರಂಭಿಸಲು ಸಂಪೂಣ೯ವಾಗಿ ತಯಾರಾಗಿದ್ದರೆ, ನೀವು ಮುಂದುವರೆಯಬಹುದು.

ಮುಖ್ಯವಾಗಿ : ವೃದ್ಧಾಪ್ಯದವರೆಗೆ ಸಹಜೀವನ ನಡೆಸಲು ಸರಿಯಾದ ವ್ಯಕ್ತಿಯನ್ನು ಕಂಡುಕೊಂಡಿದ್ದೆ ಆದರೆ ನಿಮ್ಮ ಜೀವನದ ಹಾದಿ ಸುಗಮವಾಗಿ ಸಾಗುತ್ತದೆ. ಮದುವೆ ಏಕ ಪಕ್ಷೀಯ ವಿಷಯವಲ್ಲ.

ಇಬ್ಬರ ಸಂಬಂಧ ಕೊನೆವರೆಗೂ ಗಟ್ಟಿಯಾಗಿ ಇರುತ್ತದೆ ಎಂದಾದರೆ ಮದುವೆಯಾಗಿ.

 "ಯಾವ ಸಿದ್ಧತೆಯು ಇಲ್ಲದೆ ವೈವಾಹಿಕ ಬದುಕಿಗೆ ಅಡಿ ಇಡುವ ಕೆಲವರು ಆರಂಭದಲ್ಲಿಯೇ ಸಾಕಷ್ಟು ಎಡವಟ್ಟುಗಳನ್ನು ಮಾಡಿಕೊಂಡು ಪರಿತಪಿಸುತ್ತಾರೆ.ವಿವಾಹ ಜೀವನದ ಜವಾಬ್ದಾರಿ,ಮಹತ್ವ,ತನ್ನ ಪಾತ್ರ ಮತ್ತು ಹೊಂದಾಣಿಕೆ ಕುರಿತು ಸ್ಪಷ್ಟ ಚಿತ್ರಣ ಇಟ್ಟುಕೊಂಡು ಮದುವೆಯಾಗುವುದು ಉತ್ತಮ.ಇದೆಲ್ಲವನ್ನು ಸಾಧ್ಯವಾಗಿಸುವುದೆ ನಮ್ಮ ಗುರಿ ಮತ್ತು ಆಶಯ.

"ನಿಮ್ಮೊಂದಿಗೆ ನಾವೀದ್ದೆವೆ ಇಂದೆ ನೊಂದಾಯಿಸಿಕೊಳ್ಳಿ ,ಅತ್ಯುತ್ತಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿರಿ".


I like the post? Like this!