Posted on 20, September 2021 06:14:24 PM
Welcome to EdigaMatchmaker
ನಮ್ಮ ಹಿಂದೂ ವಿವಾಹ ಪದ್ಧತಿಯಲ್ಲಿ ನಾವು ಹಲವಾರು ವಿಧಿ ವಿಧಾನಗಳನ್ನು ಅನುಸರಿಸುತ್ತೇವೆ. ಯಾವುದೇ ಧರ್ಮ ಜಾತಿಯೇ ಇರಲಿ ಒಂದೊಂದು ಪಂಗಡದವರು ಒಂದೊಂದು ವಿಧವಾದ ವೈವಾಹಿಕ ವಿಧಾನಗಳನ್ನು ಅನುಸರಿಸುತ್ತಾರೆ. ಮದುವೆಯ ಈ ಪವಿತ್ರ ಬಂಧನದಲ್ಲಿ ಪ್ರತಿಯೊಂದು ಶಾಸ್ತ್ರ ಸಂಪ್ರದಾಯಗಳಿಗೂ ಅದರದ್ದೇ ಆದ ಮೌಲ್ಯವಿದ್ದು ಈ ಮೌಲ್ಯವು ವಿವಾಹದ ಪ್ರಮುಖ ಸೂತ್ರವಾಗಿದೆ.
ವಿವಾಹವೆಂದರೆ
ಬರಿಯ ಗಂಡು ಹೆಣ್ಣಿನ ಪವಿತ್ರ
ಬಂಧನ ಮಾತ್ರವಲ್ಲ ಎರಡು ಕುಟುಂಬಗಳ
ಮಿಲನವಾಗಿದೆ.
ವಿವಾಹದಿಂದಾಗಿ
ಪರಸ್ಪರ ಕುಟುಂಬಗಳು ಒಂದಾಗುತ್ತವೆ
ಮತ್ತು ಎರಡೂ ಕುಟುಂಬಗಳಲ್ಲಿ
ಸಾಮರಸ್ಯ ಉಂಟಾಗುತ್ತದೆ.
ಮದುವೆ
ಏಳೇಳು ಜನ್ಮಗಳ ಅನುಬಂಧ,
ವಧು
ಮತ್ತು ವರನ ಸಂಬಂಧವನ್ನು ದೇವರೇ
ನಿರ್ಧರಿಸುತ್ತಾನೆ ಎನ್ನುವ
ನಂಬಿಕೆ ಕೂಡ ಇದೆ.
ವರ
ಮತ್ತು ವಧು ಸಂಪೂರ್ಣವಾಗಿ ಒಪ್ಪಿಗೆ
ಸೂಚಿಸಿದ ಬಳಿಕ ಮದುವೆ ಕಾರ್ಯಗಳು
ನಡೆಯುತ್ತದೆ.
ಮದುವೆಯು
ಮುಗಿದು ಗ್ರಹಸ್ಥಾಶ್ರಮಕ್ಕೆ
ಕಾಲಿಡುವ ವರ ಮತ್ತು ಮಧುವಿಗೆ
ಹೊಸ ಜೀವನ ಆರಂಭಿಸುವ ತವಕ.
ಅದರಲ್ಲೂ
ವಧು ಮಾತ್ರ ಹುಟ್ಟಿನಿಂದ ಬೆಳೆದು
ಬಂದ ಮನೆ,
ತಂದೆ-ತಾಯಿ,
ಸೋದರ-ಸೋದರಿಯನ್ನು
ಬಿಟ್ಟು ಬಂದು,
ಗಂಡನ
ಮನೆಯಲ್ಲಿ ಹೊಸ ಜೀವನವನ್ನು
ಆರಂಭಿಸುತ್ತಾಳೆ.
ಇನ್ನು
ಮದುವೆಯಾಗುವ ಗಂಡು ತನ್ನ ಮನೆ
ಮನವನ್ನು ತುಂಬುವ ಒಡತಿಯ ಬಗ್ಗೆ
ಸಾಕಷ್ಟು ಕನಸು ಕಾಣುತ್ತಾನೆ.